ಲಿಂಗತ್ವದ ಪೂರ್ವಗ್ರಹ ಮೀರಲು ಧ್ವನಿಯೆತ್ತಿ : ಸಿ.ಜಿ. ಮಂಜುಳಾ

ಲಿಂಗತ್ವದ ಪೂರ್ವಗ್ರಹ ಮೀರಲು ಧ್ವನಿಯೆತ್ತಿ : ಸಿ.ಜಿ. ಮಂಜುಳಾ


ಮಹಿಳಾ ಅಸಮಾನತೆಯ ವಿಷಯವು ವಿಶ್ವದಲ್ಲೇ ಗಂಭೀರವಾದ ಸಮಸ್ಯೆಯಾಗಿದೆ. ಮಹಿಳೆ ಕುರಿತಂತೆ ಜನರ ಮಾನಸಿಕತೆ ಮತ್ತು ಸಂವೇದನೆಯಲ್ಲಿ ಸಮಸ್ಯೆಯಿದ್ದು, ಜನರ ಮನಸ್ಥಿತಿ ಬದಲಾಗುವವರೆಗೂ ಮಹಿಳಾ ಸಮಾನತೆ ಸಿಗುವುದು ಕಷ್ಟ. ಲಿಂಗತ್ವ ಪೂರ್ವಗ್ರಹ ಮೀರಲು ಮಹಿಳೆಯರು ಧ್ವನಿ ಎತ್ತಬೇಕು ಎಂದು ಪತ್ರಕರ್ತರಾದ ಸಿ.ಜಿ. ಮಂಜುಳಾ ಅವರು ಅಭಿಪ್ರಾಯಪಟ್ಟರು.
ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಆಯೋಜಿಸಿದ್ದ ಭೌತವಾದಿಯ ನೆಲೆಯಲ್ಲಿ ಕನ್ನಡ ಮಹಿಳಾ ಅಧ್ಯಯನ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದಿನದಿಂದ ದಿನಕ್ಕೆ ಮಹಿಳೆಯರ ಮೇಲೆ ಅತ್ಯಾಚಾರಗಳು, ಕೌಟುಂಬಿಕ ಹಿಂಸೆ, ಹೆಣ್ಣು ಭ್ರೂಣ ಹತ್ಯೆ, ಉದ್ಯೋಗ ಸ್ಥಳದಲ್ಲಿನ ಕಿರುಕುಳ ಸೇರಿದಂತೆ ದೌರ್ಜನ್ಯಗಳು ಹೆಚ್ಚುತ್ತಿವೆ. ರಾಜಕಾರಣ ವ್ಯವಸ್ಥೆಯಲ್ಲಿ ಮಹಿಳೆ ಇಂದಿಗೂ ಮುಖ್ಯವಾಹಿನಿಗೆ ಬರುತ್ತಿಲ್ಲ. ರೈತ ಎಂದಾಕ್ಷಣ ಮಣ್ಣಿನ ಮಗ ಎಂದು ಕರೆಯುತ್ತೇವೆ ಹೊರತಾಗಿ ಮಣ್ಣಿನ ಮಗಳು ಎಂಬುದನ್ನು ಮರೆತಿದ್ದೇವೆ. ಯಾವುದೇ ಪ್ರಮುಖ ನಿರ್ಧಾರ, ನಿರ್ಣಯ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಪುರುಷನೇ ಮುಂದಿರುವನು. ಚರಿತ್ರೆ ಮತ್ತು ಭಾಷೆ ವಿಷಯದಲ್ಲೂ ಪುರುಷ ಮೇಲುಗೈ ಸಾಧಿಸಿದ್ದು, ಮಹಿಳೆ ಹಿಂದುಳಿದಿರುವುದನ್ನು ಕಾಣಬಹುದು. ಕೋವಿಡ್೧೯ ಸಂದರ್ಭದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕೌಟುಂಬಿಕ ಹಿಂಸೆ, ಬಾಲ್ಯ ವಿವಾಹಗಳಿಗೆ ಒಳಗಾಗಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಕೋವಿಡ್ ನಂತರ ಪುರುಷರು ಉದ್ಯೋಗಗಳಿಗೆ ಹಿಂತಿರುಗಿರುವಷ್ಟು ಪ್ರಮಾಣದಲ್ಲಿ ಮಹಿಳೆಯರು ಹಿಂದಿರುಗಿಲ್ಲದಿರುವುದು ಅಂಕಿ-ಅಂಶಗಳಿಂದ ಕಂಡು ಬಂದಿದೆ. ನಿರುದ್ಯೋಗಿಗಳಾಗಿರುವುದು ಕಂಡು ಬಂದಿದೆ. ಮಹಿಳೆಯರು ಅನೇಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು, ಅವರ ದುಡಿಮೆ ಮತ್ತು ವೇತನದಲ್ಲಿ ತಾರತಮ್ಯವನ್ನು ಕಾಣುತ್ತಿದ್ದೇವೆ. ಲಿಂಗತ್ವ ಪೂರ್ವಗ್ರಹವು ಮಹಿಳೆಯರ ಏಳಿಗೆಯನ್ನು ದಿನದಿಂದ ದಿನಕ್ಕೆ ಕುಂದಿಸುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು. ಮಹಿಳೆಯನ್ನು ಸಹಜೀವಿಯಾಗಿ ಕಾಣುವುದು ಮುಖ್ಯ. ಹೆಣ್ಣು, ಗಂಡು, ಮಂಗಳಮುಖಿ, ದ್ವಿಲಿಂಗಿಗಳು ಸೇರಿದಂತೆ ವೈವಿಧ್ಯಮಯ ಜನರ ಪಾಲ್ಗೋಳ್ಳುವಿಕೆಯು ಸಹಭಾಗಿತ್ವ ಸಮಾಜದ ನಿರ್ಮಾಣಕ್ಕೆ ಸಹಕಾರಿ ಹೇಳಿದರು.
ಅಲ್ಬರ್ಟಾ ವಿಶ್ವವಿದ್ಯಾಲಯದ ಇಂಗ್ಲೀಷ ಮತ್ತು ಸಿನಿಮಾ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ.ಶಶಿಕುಮಾರ ಅವರು ಆನ್‌ಲೈನ್ ಮೂಲಕ ವಿಶೇಷ ಉಪನ್ಯಾಸ ನೀಡುತ್ತ ಗಂಡು-ಹೆಣ್ಣು ಎಂಬ ಪರಿಭಾಷೆಯಲ್ಲಿ ಮಾತನಾಡುತ್ತೇವೆ. ಈ ಪರಿಭಾಷೆಯನ್ನು ಮೊದಲಿನಿಂದಲೇ ರೂಪಿಸಿದ್ದು, ಇದು ನಮ್ಮ ಪೂರ್ವಗ್ರಹವನ್ನು ಸೂಚಿಸುತ್ತದೆ. ಎಲ್ಲಾ ರಂಗದಲ್ಲೂ ಮಹಿಳೆ ಮುಂಚಿನಿಂದಲೂ ಶೋಷಣೆಗೆ ಒಳಗಾಗಿರುವುದರಿಂದ ಮಹಿಳಾ ಅಧ್ಯಯನ ವಿಭಾಗವನ್ನು ರೂಪಿಸಲಾಗಿದೆ. ಮಹಿಳೆಯರು ವಾಸಿಸುವ ಭೌಗೋಳಿಕ ಪರಿಸರ, ಹವಾಮಾನ, ಜಾತಿವ್ಯವಸ್ಥೆ, ವರ್ಗ ವ್ಯವಸ್ಥೆಗಳು ಮಹಿಳಾ ಅಸಮಾನತೆಯ ಮೇಲೆ ಪ್ರಭಾವ ಬೀರಬಲ್ಲವು. ಮಹಿಳೆಯರ ಕುರಿತಂತೆ ಅಧ್ಯಯನ ಕೈಗೊಳ್ಳುವ ಸಂದರ್ಭದಲ್ಲಿ ಮಹಿಳಾ ಪ್ರಜ್ಞೆಯ ಜೊತೆಗೆ ಅವರ ಭೌತಿಕ ಪರಿಸರವನ್ನು ಅವಲೋಕಿಸುವುದು ಮುಖ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕನ್ನಡ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ಎ.ಸುಬ್ಬಣ್ಣ ರೈ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡುತ್ತ ನಾಡಿನಲ್ಲಿ ಹಲವಾರು ದಿನಾಚರಣೆಗಳನ್ನು ಆಚರಿಸುತ್ತೇವೆ. ಎಲ್ಲಾ ಆಚರಣೆಗಳಿಗೂ ಅದರದೇ ಆದ ಹಿನ್ನಲೆಯಿರುತ್ತದೆ. ಮಹಿಳಾ ದಿನಾಚರಣೆಗೂ ಅದರದೇ ಆದ ಹಿನ್ನಲೆಯಿರುವುದು. ಮಹಿಳಾ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಮುಂದಾಗಬೇಕಿದೆ ಎಂದು ತಿಳಿಸಿದರು.
ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ.ಶೈಲಾಜಾ ಹಿರೇಮಠ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತ ಅಮೇರಿಕವು ಕೋವಿಡ್ ೧೯ ಸಂದರ್ಭದಲ್ಲಿ ನಾಯಕತ್ವ ಸಾಧನೆಯಲ್ಲಿ ಸಮಾನ ಅವಕಾಶ ಕುರಿತ ಧ್ಯೇಯವಾಕ್ಯದೊಂದಿಗೆ ಮಹಿಳೆಯರ ವಿಷಯವನ್ನು ಅವಲೋಕಿಸಿದೆ. ಈ ಭಾರಿಯ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಧ್ಯೇಯ ವಾಕ್ಯ : ಅhoose ಣo ಅhಚಿಟಟeಟಿge ಆಗಿದೆ. ಮಹಿಳಾ ಸಬಲೀಕರಣ ಮತ್ತು ಹಕ್ಕುಗಳ ಒಳಗೊಳ್ಳುವಿಕೆ ಇಂದಿಗೂ ಸವಾಲಾಗಿದೆ. ಈ ಹಿನ್ನಲೆಯಲ್ಲಿ ಮಹಿಳೆಯರು ತಮಗೆ ಎದುರಾಗುವ ಪ್ರತಿಯೊಂದು ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸುವುದನ್ನು ಕಲಿಯುವುದು ಮುಖ್ಯ. ಎಲ್ಲಾ ವಿಷಯಗಳಲ್ಲೂ ಆಯ್ಕೆಯ ಸ್ವಾತಂತ್ರ್ಯವನ್ನು ಬಳಸಿಕೊಳ್ಳುವುದರ ಮೂಲಕ ನಿಮ್ಮ ಜೀವನದಲ್ಲಿ ಅಪೇಕ್ಷಿತ ಬದಲಾವಣೆಯನ್ನು ಕಂಡುಕೊಳ್ಳಿ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ವಿವಿಧ ವಿಭಾಗದ ಡೀನರು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಂಗೀತ ವಿಭಾಗದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಪ್ರಾರ್ಥಿಸಿದರು. ಮಹಿಳಾ ಅಧ್ಯಯನ ವಿಭಾಗದ ವಿದ್ಯಾರ್ಥಿನಿ ಶಿಲ್ಪ ಅವರು ನಿರೂಪಿಸಿದರು. ಮಹಿಳಾ ಅಧ್ಯಯನ ವಿಭಾಗದ ವಿದ್ಯಾರ್ಥಿನಿ ತಾಯಿಶ್ರೀ ವಂದಿಸಿದರು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s